ಪೂರಕ ಪೌಷ್ಠಿಕ ಆಹಾರ-6 ತಿಂಗಳಿಂದ 6 ವರ್ಷದ ಮಕ್ಕಳಿಗೆ ರೂ.6/- ಗ/ಬಾ/ಕಿ/ರವರಿಗೆ ರೂ.7/-
ಅತಿ ಕಡಿಮೆ ತೂಕವುಳ್ಳ ಮಕ್ಕಳಿಗೆ ರೂ.9/- ಮೊತ್ತದ ಪೂರಕ ಪೌಷ್ಠಿಕ ಆಹಾರವನ್ನು ಪ್ರತಿ ಒಂದು ದಿನಕ್ಕೆ ಫಲಾನುಭವಿಗಳಿಗೆ
ನೀಡಲಾಗುತ್ತಿದೆ
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ, ಚುಚ್ಚುಮದ್ದು, ಆರೋಗ್ಯ ತಪಸಣೆ, ಮಾಹಿತಿ ಸೇವೆ.
ಆರೋಗ್ಯ ತಪಾಸಣೆ
ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ.
ಅತಿ ಕಡಿಮೆ ತೂಕದ ಮಕ್ಕಳಿಗೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಕೊಂಡು ಮಗುವಿಗೆ ರೂ.2000/-ದ ಮಿತಿಯೊಳಗೆ ಔಷಧಿ ನೀಡಲಾಗುತ್ತದೆ. ಹಾಗೂ ಹೆಚ್ಚಿನ ಪ್ರಮಾಣದ ಹಾರದೊಂದಿಗೆ ವಾರದಲ್ಲಿ 3 ದಿವಸ ಕೆನೆಭರಿತ ಹಾಲು ಹಾಗೂ ಕೋಳಿ ಮೊಟ್ಟೆಯನ್ನು ನೀಡಲಾಗುತ್ತಿದೆ.
ಅಂಗನವಾಡಿ ಕೇಂದ್ರದಲ್ಲಿ 9 ತಿಂಗಳಿಂದ 5 ವರ್ಷದ ಮಕ್ಕಳಿಗೆ ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ಇಲಾಖೆಯಿಂದ ವಿಟಾಮಿನ್ ಎ ದ್ರಾವಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಲ್ಬಂಡೆಜಾಲ್ ಮಾತ್ರೆಯನ್ನು ನೀಡಲಾಗುತ್ತಿದೆ.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
6 ವರ್ಷ ಒಳಗಿನ ಮಕ್ಕಳು; ಗರ್ಭಿಣಿ, ಬಾಣಂತಿ, ಕಿಶೋರಿಯರು
ಅರ್ಹತೆಗಳು/ಮಾನದಂಡಗಳು
ಗರ್ಭಾವಸ್ಥೆಯಲ್ಲಿ 6 ತಿಂಗಳು ಮತ್ತು 6 ತಿಂಗಳವರೆಗೆ ಬಾಣಂತಿಗೆ, 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಪ್ರತಿ ಕೇಂದ್ರಕ್ಕೆ ಇಬ್ಬರು ಕಿಶೋರಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ, ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತಿದೆ.
ಆರೋಗ್ಯ ತೊಂದರೆಯಿರುವಂತಹ ಫಲಾನುಭವಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ.
3 ವರ್ಷದಿಂದ 6 ವರ್ಷದ ಮಕ್ಕಳಿಗೆ ಅಭಿನಯ, ಕಥೆ ಹಾಗೂ ಆಟಗಳ ಮೂಲಕ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಬಿಪಿಎಲ್ ಕಾರ್ಡ್
ಜನನ ಪ್ರಮಾಣ ಪತ್ರ
ಸಂಪರ್ಕ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಕಚೇರಿನ್ನು ಸಂಪರ್ಕಿಸುವುದು