ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಹಾಗೂ ಅನೈತಿಕ ವ್ಯವಹಾರಗಳ (ತಡೆಗಟ್ಟುವ) ಅಧಿನಿಯಮ 1956ರ ಅಡಿಯಲ್ಲಿ ನ್ಯಾಯಾಲಯದಿಂದ ದಾಖಲಾದ ಪ್ರಕರಣಗಳು ಹಾಗೂ ಬಾಲಕಿಯರ ಬಾಲಮಂದಿರದಲ್ಲಿ 18 ವರ್ಷತುಂಬಿದ ನಿವಾಸಿಯರನ್ನು ದೀರ್ಘಾವಧಿ ಪುನರ್ವಸತಿಗಾಗಿ ದಾಖಲಿಸಿಕೊಳ್ಳಲಾಗುವುದು
ಸಂಸ್ಥೆಯಲ್ಲಿ ನಿವಾಸಿಯರಿಗೆ ಪಾಲನೆ, ಪೋಷಣೆ, ಊಟ, ವಸತಿ, ಬಟ್ಟೆ, ವೈದ್ಯಕೀಯ ಸೌಲಭ್ಯ, ರಕ್ಷಣೆ ಮತ್ತು ತರಬೇತಿಯನ್ನು ನೀಡಲಾಗುವುದು.
ಧೀರ್ಘಾವಧಿ ಪುನರ್ವಸತಿ ಕೇಂದ್ರ. ನಿವಾಸಿಯರನ್ನು ಪೋಷಕರು ವಶಕ್ಕೆ ಪಡೆಯಲು ಇಚ್ಚಿಸಿದಲ್ಲಿ ನಿಯಮಾ ನುಸಾರ ಬಿಡುಗಡೆ ಮಾಡಲಾಗುತ್ತದೆ
ಸಂಸ್ಥೆಯಲ್ಲಿರುವ ನಿವಾಸಿಗಳಿಗೆ ಅರ್ಹ ವಿವಾಹ ಪ್ರಸ್ತಾಪವಿದ್ದ ಸಂದರ್ಭದಲ್ಲಿ ವಿವಾಹವನ್ನು ಸಹ ನೆರವೇರಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು ರೂ.20,000ಗಳನ್ನು ನೀಡಲಾಗುತ್ತಿದ್ದು, ರೂ.5,000 ಗಳನ್ನು ಮದುವೆ ಖರ್ಚು ಹಾಗೂ ಉಳಿದರೂ.15,000 ಗಳನ್ನು ನಿವಾಸಿಯ ಹೆಸರಿನಲ್ಲಿ ಠೇವಣಿ ಇಡಲಾಗುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಕಚೇರಿನ್ನು ಸಂಪರ್ಕಿಸುವುದು