ಮಹಿಳೆಯರಿಗೆ ಮಾಹಿತಿಯನ್ನು ನೀಡಲು ಹಾಗೂ ದೌರ್ಜನ್ಯ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ತುರ್ತು ನೆರವನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಯೂನಿವರ್ಸಲೈಸೇಷನ್ ಆಫ್ ವುಮೆನ್ ಹೆಲ್ಫ್ ಲೈನ್ – 181 ಎಂಬ ಉಚಿತ ದೂರವಾಣಿ ಸೇವೆಯನ್ನು ದಿನದ 24*7 ಗಂಟೆಗಳು ರಾಜ್ಯಾದ್ಯಂತ ಒದಗಿಸಲಾಗುತ್ತಿದೆ.
ತುರ್ತು ರಕ್ಷಣೆ ಸಂದರ್ಭದಲ್ಲಿ ಕರೆಗಳನ್ನು ಪೊಲೀಸರಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಕರೆಗಳನ್ನು ತಾಲ್ಲೂಕು ಸಂರಕ್ಷಣಾಧಿಕಾರಿಗಳಿಗೆ ವರ್ಗಾಯಿಸಿ ಸೇವೆ ನೀಡಲಾಗುತ್ತಿದೆ
ಸಮಾಲೋಚನಾ ಕರೆಗಳನ್ನು ಸಖಿ ಕೇಂದ್ರಗಳಿಗೆ, ಸಾಂತ್ವನ ಕೇಂದ್ರಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
ತಾತ್ಕಾಲಿಕ ಆಶ್ರಯ ಬಯಸುವ ಕರೆಗಳನ್ನು ಸ್ವಾಧಾರ ಗೃಹಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಕರೆಗಳನ್ನು ಬಾಲ್ಯ ವಿವಾಹ ನಿಷೇದಾಧಿಕಾರಿಗಳಿಗೆ ವರ್ಗಾಯಿಸಿ ಸೇವೆ ಒದಗಿಸಲಾಗುತ್ತಿದೆ.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಮಹಿಳೆಯರಿಗೆ
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಕಚೇರಿನ್ನು ಸಂಪರ್ಕಿಸುವುದು