ಅಂಚೆ ಮೂಲಕ ಕನ್ನಡ ಕಲಿಕೆ : ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಕಾರದೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಮತ್ತು ಕಾರ್ಖಾನೆಗಳ ಸಿಬ್ಬಂದಿ, ಹತ್ತು ತಿಂಗಳ ಅವಧಿಯಲ್ಲಿ ಅಂಚೆ ಮೂಲಕ ಕನ್ನಡ ಕಲಿಯಬಹುದಾಗಿದೆ.
ಕನ್ನಡ ಬಾರದವರಿಗೆ ಕನ್ನಡ ಕಲಿಕೆ: ಈ ತರಬೇತಿಯ ಅವಧಿ ಆರು ತಿಂಗಳು. ಕನ್ನಡ ಓದು-ಬರಹ-ಮಾತು ಈ ಮೂರೂ ಹಂತಗಳಲ್ಲಿ ವ್ಯಾವಹಾರಿಕ ಕನ್ನಡವನ್ನು ನಿಗಮ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆ/ಉದ್ದಿಮೆಗಳ ನೌಕರರಿಗೆ, ಸಾರ್ವಜನಿಕರಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಕಲಿಸಲಾಗುತ್ತಿದೆ.
ಪೂರಕ ಸಾಹಿತ್ಯ ಸರಬರಾಜು: ಕಚೇರಿಗಳ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಅನುಕೂಲವಾಗುವಂತೆ ಮಾದರಿ ಕಚೇರಿ ಕೈಪಿಡಿ, ಆಡಳಿತ ಪದಕೋಶ ಮುಂತಾದ ಪೂರಕ ಸಾಹಿತ್ಯವನ್ನು ಪೂರೈಸಲಾಗುತ್ತದೆ.
ರಿಯಾಯಿತಿ
ಅಖಿಲ ಭಾರತ ಭಾಷಾ ಸೌಹಾರ್ದ ಕಾರ್ಯಕ್ರಮ: ಕನ್ನಡದ ಕವಿ, ಸರ್ವಜ್ಞನ ಪ್ರತಿಮೆಯನ್ನು ಚೆನ್ನೈನಲ್ಲೂ, ತಮಿಳಿನ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲೂ ಸ್ಥಾಪಿಸಿದ ಸಂದರ್ಭದ ಸ್ಮರಣಾರ್ಥವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿವರ್ಷ ಆಗಸ್ಟ್ 13ರಂದು ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಸಂವಾದಗೋಷ್ಠಿ ಹಾಗೂ ಕನ್ನಡ ಭಾಷೆ, ಕನ್ನಡದ ಸೋದರ ಭಾಷೆಗಳು ಮತ್ತು ಭಾರತೀಯ ಇತರೆ ರಾಜ್ಯದ ಭಾಷೆಗಳ ಕವಿಗಳನ್ನೊಳಗೊಂಡ ಬಹುಭಾಷಾ ಕವಿಗೋಷ್ಠಿಯನ್ನು ನಡೆಸಲಾಗುತ್ತದೆ.
ಭಾರತೀಯ ಭಾಷೆಗಳ ನಡುವಿನ ಬಾಂಧವ್ಯವನ್ನು ಸಾಂಸ್ಕೃತಿಕವಾಗಿ ಬೆಸೆಯುವ ದಿಸೆಯಲ್ಲಿ ಇದೊಂದು ಯಶಸ್ವಿ ಕಾರ್ಯಕ್ರಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014ರ ಆಗಸ್ಟ್ 13 ರಂದು ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆಯನ್ನು ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಿದ್ದು ಅಂದು ಬೆಳಗ್ಗೆ ಸಂಸ್ಕೃತಿ ಸಹಸ್ಪಂದನ ಎಂಬ ಸಂವಾದ ಗೋಷ್ಠಿಯನ್ನು ಮತ್ತು ಮಧ್ಯಾಹ್ನ ಬಹುಭಾಷಾ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕನ್ನಡ ಭಾಷೆ, ಸೋದರ ಭಾಷೆಗಳು ಹಾಗೂ ಭಾರತದ ಇತರ ರಾಜ್ಯದ ಭಾಷೆಗಳ ಲೇಖಕರು ಪಾಲ್ಗೊಳ್ಳಲಿದ್ದಾರೆ.
ಯಾರಿಗೆ / ಅರ್ಹತೆ ?
ಯಾರಿಗೆ?
ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಮತ್ತು ಕಾರ್ಖಾನೆಗಳ ಸಿಬ್ಬಂದಿ, ಹತ್ತು ತಿಂಗಳ ಅವಧಿಯಲ್ಲಿ ಅಂಚೆ ಮೂಲಕ ಕನ್ನಡ ಕಲಿಯಬಹುದಾಗಿದೆ.
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
ಕರ್ನಾಟಕ – 560002