ಕಾನೂನು ಪದವಿಯನ್ನು ಪೂರ್ಣಗೊಳಿಸಿದ ಪರಿಶಿಷ್ಟ ಜಾತಿ ಯುವಕ ಯುವತಿಯರು ಹಿರಿಯ ವಕೀಲರಲ್ಲಿ ವೃತ್ತಿ ತರಬೇತಿಯನ್ನು ಪಡೆಯುವಂತಹ ಕಾನೂನು ಪದವೀಧರರಿಗೆ ಮಾಸಿಕ ರೂ.10,000/- ಶಿಷ್ಯವವೇತನವನ್ನು ಮಂಜೂರು ಮಾಡಲಾಗುವುದು ಹಾಗೂ ತರಬೇತಿಯ ನಂತರ ಕಛೇರಿ ತೆರೆಯಲು ಮತ್ತು ಪೀಠೋಪಕರಣ/ ಪುಸ್ತಕ ಖರೀದಿಗಾಗಿ ನಗರಸಭೆಗಳಲ್ಲಿ ರೂ.1.00 ಲಕ್ಷಗಳನ್ನು ತಾಲ್ಲೋಕು/ಟಿ.ಎಂ.ಸಿ ಕೇಂದ್ರ ಸ್ಥಾನಗಳಲ್ಲಿ ರೂ.50,000/-ಗಳನ್ನು ಒಂದು ಬಾರಿಗೆ ನೀಡಲಾಗುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಕಾನೂನು ಪದವಿಯನ್ನು ಪೂರ್ಣಗೊಳಿಸಿದ ಪರಿಶಿಷ್ಟ ಜಾತಿ ಯುವಕ ಯುವತಿಯರು ಹಿರಿಯ ವಕೀಲರಲ್ಲಿ ವೃತ್ತಿ ತರಬೇತಿಯನ್ನು ಪಡೆಯುವಂತಹ ಕಾನೂನು ಪದವೀಧರರಿಗೆ
ಅರ್ಹತೆಗಳು/ಮಾನದಂಡಗಳು
ಕಾನೂನು ಪದವಿ ಪಡೆದ ಎರಡು ವರ್ಷಗಳಲ್ಲಿ ವೃತ್ತಿ ತರಬೇತಿಗಾಗಿ ಅರ್ಜಿ ಸಲ್ಲಿಸುವುದು.
ಕಾನೂನು ಪದವಿ ಪಡೆದ ವಿದ್ಯಾರ್ಥಿಗಳ ವಯೋಮಿತಿ ಗರಿಷ್ಠ 40 ವರ್ಷಗಳು (ಅರ್ಜಿ ಸಲ್ಲಿಸಲು ಕಡೆಯ ದಿನಾಂಕಕ್ಕೆ):-
ಕಾನೂನು ಪದವಿ ಪಡೆದ ವಿದ್ಯಾರ್ಥಿಗಳ ವಾರ್ಷಿಕ ಆದಾಯ ಗರಿಷ್ಠ ರೂ.2.00 ಲಕ್ಷಗಳು.
ಕಾನೂನು ಪದವಿ ಪಡೆದ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಅವಧಿಯು ಎರಡು ವರ್ಷಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಸಮಾಜ ಕಲ್ಯಾಣ ಇಲಾಖೆ
ವಿಳಾಸ: 5ನೇ ಮಹಡಿ, ಬಹುಮಹಡಿ ಕಟ್ಟಡ,
ಡಾ: ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560 001