ವೃತ್ತಿ ದರ್ಶಿ
ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಅರಿವು
ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ, ಉನ್ನತ ಶಿಕ್ಷಣದಲ್ಲಿ ರಾಜ್ಯದ ಮಕ್ಕಳ ದಾಖಲಾತಿ ದರ (Gross Enrolment Ratio) ಕೇವಲ ಶೇ. 32ರಷ್ಟು ಇರುತ್ತದೆ. ಇದನ್ನು ಹೆಚ್ಚಿಸಲು 10ನೇ ಮತ್ತು 12ನೇ ತರಗತಿಗಳ ನಂತರ ತಿಳುವಳಿಕೆಯುಳ್ಳ ವೃತ್ತಿ ಆಯ್ಕೆಯನ್ನು ಮಾಡಲು ವಿದ್ಯಾರ್ಥಿಗಳಿಗಾಗಿ ಸುಮಾರು 550+ ವೃತ್ತಿಪರ ಮಾಹಿತಿಗಳನ್ನು Yuva Kanaja ಪೋರ್ಟಲ್ನ ಮೂಲಕ ಒದಗಿಸಲಾಗುತ್ತಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯೊಂದಿಗೆ ಸಜ್ಜುಗೊಳಿಸುವ ಮೂಲಕ ಪ್ರತಿಭಾವಂತ ಉದ್ಯೋಗಿಗಳನ್ನು ಪೋಷಿಸಲು ಮತ್ತು ಉಜ್ವಲ ಭವಿಷ್ಯವನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.
ಸಿಎಸ್ಆರ್ ಅಡಿಯಲ್ಲಿ UNDP ಸಂಸ್ಥೆಯು SAP ಸಂಸ್ಥೆಯೊಂದಿಗೆ ಜೊತೆಗೂಡಿ, ಸಿದ್ದಪಡಿಸಲಾಗಿರುವ Code Unnati ಎಂಬ ಯೋಜನೆಯನ್ನು ಈಗಾಗಲೇ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡಿದಲ್ಲಿ, ಅವರ ಕೌಶಲ್ಯವನ್ನು ವೃದ್ಧಿಸಿ, ಉದ್ಯೋಗಾವಕಾಶವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಈ ಧ್ಯೇಯದೊಂದಿಗೆ ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ (ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ, ಪಂ. ರಾ. & ಗ್ರಾ ಆಭಿವ್ರುದ್ಧಿ, ಶಿಕ್ಷಣ, ಯುವಜನ ಸಬಲೀಕರಣ & ಕ್ರೀಡೆ) ವೃತ್ತಿದರ್ಶಿ ಕಾರ್ಯಕ್ರಮವನ್ನು UNDP ಯ ತಾಂತ್ರಿಕ ಬೆಂಬಲದೊಂದಿಗೆ ತಯಾರಿಸಲಾಗಿದೆ.