ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)
ಮೇ 3, 2024ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)
ಮೇ 3, 2024
ಸೌಲಭ್ಯಗಳು
- ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ಕಾರ್ಮಿಕ ರಿಂದ ಅರ್ಜಿಯನ್ನು ಸ್ವೀಕರಿಸಿ ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಅವನ / ಅವಳ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಗಳನ್ನೂ (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮಂಜೂರು ಮಾಡಬೇಕು.
- ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ.
- ನೋಂದಾಯಿತ ಕಟ್ಟಡ ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
- ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. (ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬದಲ್ಲಿ ಇರುವ ನೋಂದಾಯಿತ ನಿರ್ಮಾಣ ಕಾರ್ಮಿಕನ ಸದಸ್ಯರನ್ನು ಲೆಕ್ಕಿಸದೆ ಒಂದು ನಿರ್ದಿಷ್ಠವಾದ ಮದುವೆಗೆ ಒಂದೇ ಸಹಾಯ ಧನವಾಗಿ ಹಕ್ಕು ಸಾಧಿಸಬೇಕಾಗಿರುತ್ತದೆ).
- ನೋಂದಾಯಿತ ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
- ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ
- ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
- ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
- ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ
- ಫಲಾನುಭವಿಯೆಂದು ನೊಂದಣೆಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು
- ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
- ಮದುವೆಯ ಆಮಂತ್ರಣ ಪತ್ರ
- ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡೆವಿಟ್ ಸಲ್ಲಿಸುವುದು
- ರೇಷನ್ ಕಾರ್ಡ್
- ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನುಸಲ್ಲಿಸುವುದು