ಪರಿಶಿಷ್ಟ ಜಾತಿಯ ನಿರುದ್ಯೋಗಿಗಳಿಗೆ ವಿವಿಧ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಹಾಗೂ ಲಾಭದಾಯಕವಾಗಿ ನಡೆಸಲು ಅಗತ್ಯವಾದ ಉದ್ಯಮಶೀಲತಾ ತರಬೇತಿ/ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಘಟಕಗಳನ್ನು ಸೃಷ್ಟಿಸಲು ವ್ಯವಸ್ಥೆ ಮಾಡಲಾಗುವುದು
ಉತ್ತಮ ಮಾರುಕಟ್ಟೆ ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಬ್ರಾಂಡೆಡ್ ಸಂಸ್ಥೆಗಳ ಸಹಯೋಗದಲ್ಲಿ ಫ್ರಾಂಚೈಸಿ/ಡೀಲರ್‍ಶಿಪ್ ವ್ಯವಸ್ಥೆಯೊಂದಿಗೆ ರಿಟೈಲ್ ವ್ಯಾಪಾರಿ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಬೆಂಬಲ ನೀಡಿ ಯಶಸ್ವಿ
ಉದ್ದಿಮೆದಾರರನ್ನಾಗಿ ಮಾಡುವುದು
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.5,00,000/- ಮೀತಿಯೊಳಗಿರಬೇಕು.
ಅರ್ಜಿದಾರರು/ಕುಟುಂಬದ ಅವಲಂಭಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ/ ಸರ್ಕಾರದಿಂದ ರೂ.1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.
ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.