ಕಾಲೇಜು ಶಿಕ್ಷಣ ಇಲಾಖೆ: ಹೆಚ್.ಐ.ವಿ. / ಏಡ್ಸ್ ಅಥವಾ ಕುಷ್ಠರೋಗ ಪೀಡಿತರಾದ (ಬದುಕಿರುವ ಇಲ್ಲವೇ ಮೃತಹೊಂದಿರುವ) ತಂದೆ ತಾಯಂದಿರಿಗೆ ಜನಿಸಿದ ವಿದ್ಯಾರ್ಥಿಗಳಿಗೆ ಮತ್ತು ಹೆಚ್.ಐ.ವಿ / ಏಡ್ಸ್ ಅಥವಾ ಕುಷ್ಠರೋಗ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಶಿಷ್ಯವೇತನ
ಪ್ರಪ್ರತಿ ತಿಂಗಳು ರೂ.1500 ರಂತೆ 12 ತಿಂಗಳೀಗೆ ಜೀವನೋಪಾಯದ ಭತ್ಯೆಯನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದು
ಸರ್ಕಾರಿ/ಸರ್ಕಾರಿ ಅನುದಾನಿತ ಕಾಲೇಜು/ಸರ್ಕಾರಿ ಕೋಟಾ ಅಡಿಯಲ್ಲಿರುವ ಸ್ವಾಯತ್ತತೆ ಹೊಂದಿರುವ ಕಾಲೇಜುಗಳಲ್ಲಿನ ಮನೆಪಾಠದ ಶುಲ್ಕವನ್ನು ಮರುಪಾವತಿಗೊಳಿಸಬಹುದು. ಆದರೆ ಆಡಳಿತಾತ್ಮಕ ಕೋಟಾಯಡಿಯಲ್ಲಿನ ಮನೆಪಾಠದ ಶುಲ್ಕವನ್ನು ಮರುಪಾವತಿಗೊಳಿಸಲು ಬರುವುದಿಲ್ಲ.
ಪ್ರತಿ ಅರ್ಹ ವಿದ್ಯಾರ್ಥಿಗೆ ರೂ.3000 ರಂತೆ ಪ್ರತಿ ವರ್ಷ ಶುಲ್ಕಪಾವತಿ/ಬಟ್ಟೆ/ವಸ್ತ್ರ, ಪುಸ್ತಕ ಮತ್ತು ಕಲಿಕೋಪಕರಣಗಳಿಗೆ ನೀಡಬಹುದಾಗಿದೆ
ರಿಯಾಯಿತಿ
ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಸಂದಾಯವಾಗುತ್ತದೆ
ಯಾರಿಗೆ / ಅರ್ಹತೆ ?
ಯಾರಿಗೆ?
ಕಾಲೇಜುಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ
ಅರ್ಹತೆಗಳು/ಮಾನದಂಡಗಳು
ಹೆಚ್.ಐ.ವಿ./ಏಡ್ಸ್ ಅಥವಾ ಕುಷ್ಟ ರೋಗದಿಂದ ಸೋಂಕಿತರಾಗಿದ್ದು ಬದುಕಿರುವ ಅಥವಾ ಮೃತರಾಗಿರುವ ತಂದೆತಾಯಿಯರಿಗೆ ಜನಿಸಿದ ಮಕ್ಕಳು
ಪ್ರಸ್ತುತ ರೋಗಗ್ರಸ್ತ ಅಥವಾ ರೋಗಮುಕ್ತವಾಗಿರುವ ಪರಿಸ್ಥಿತಿಯನ್ನು ಪರಿಗಣಿಸದೇ ಹೆಚ್.ಐ.ವಿ./ಏಡ್ಸ್ ಅಥವಾ ಕುಷ್ಟ ರೋಗದಿಂದ ಸೋಂಕಿತರಾದ ವಿದ್ಯಾರ್ಥಿ.
ರೋಗಗ್ರಸ್ತ ವಿದ್ಯಾರ್ಥಿಯ ಕುಟುಂಬ ಕರ್ನಾಟಕದಲ್ಲಿ ಕನಿಷ್ಟ 25 ವರ್ಷಗಳ ವಾಸ್ತವ್ಯ ಹೊಂದಿರಬೇಕು
ರೋಗಗ್ರಸ್ತ ವಿದ್ಯಾರ್ಥಿಯು ತನ್ನ ಕುಟುಂಬದೊಂದಿಗೆ ವಿದ್ಯಾರ್ಥಿನಿಲಯ ಅಥವಾ ಅನಾಥಾಲಯದಲ್ಲಿ ಅಥವಾ ಹೆಚ್.ಐ.ವಿ./ಕುಷ್ಠ ನಿಲಯಗಳಲ್ಲಿ ವಾಸಿಸುತ್ತಿರುವರಾಗಿರಬಹುದು
ವಿದ್ಯಾರ್ಥಿಯು ಅಥವಾ ಅವರ ತಂದೆತಾಯಿಗಳು ಕುಷ್ಠ ರೋಗಕ್ಕೆ ಎಂ.ಡಿ.ಟಿ ಚಿಕಿತ್ಸೆ ಪಡೆದವರಾಗಿರಬೇಕು ಅಥವಾ ಹೆಚ್.ಐ.ವಿ./ಏಡ್ಸ್ ರೋಗಕ್ಕೆ ಎ.ಆರ್.ಟಿ. ಚಿಕಿತ್ಸೆ ಪಡೆದವರಾಗಿರಬೇಕು
ಈ ಯೋಜನೆಯು ಸರ್ಕಾರಿ ಹಾಗೂ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ಅನ್ವಯವಾಗುತ್ತದೆ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಕಾಲೇಜಿನ ಕಛೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ವ್ಯಾಸಂಗದ ಅವಧಿಯಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವುದು