ಪ್ರತಿ ಅರ್ಹ ವಿದ್ಯಾರ್ಥಿನಿಗೆ ವಾರ್ಷಿಕ ರೂ.2000 ವಿದ್ಯಾರ್ಥಿವೇತನ ನೀಡಲಾಗುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಕಾಲೇಜುಗಳ ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ
ಅರ್ಹತೆಗಳು/ಮಾನದಂಡಗಳು
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ & ವಿಜ್ಞಾನ ವಿಭಾಗಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಉತ್ತಮ & ಪ್ರತಿಭಾವಂತ ವಿದ್ಯಾರ್ಥಿನಿಯರು ಅರ್ಹರು
ಈ ವಿದ್ಯಾರ್ಥಿವೇತನವನ್ನು ಸರ್ಕಾರಿ ಶಾಲೆಗಳಲ್ಲಿ 1 ರಿಂದ 7ನೇ ತರಗತಿಗಳವರೆಗೆ ಓದಿದ ವಿದ್ಯಾರ್ಥಿನಿಯರಿಗೆ ಸೀಮಿತಗೊಳಿಸಲಾಗಿದೆ.
ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಶೇ.50 ಅಂಕ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರು ಶೇ.45 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಪದವಿ ವಿದ್ಯಾರ್ಥಿನಿಯರು ದ್ವಿತೀಯ ಪಿ.ಯು.ಸಿ.ಯಲ್ಲಿ ನೂತನ ವಿದ್ಯಾರ್ಥಿವೇತನಕ್ಕೆ ಹಾಗೂ ನವೀಕರಣ ವಿದ್ಯಾರ್ಥಿನಿಯರು ಹಿಂದಿನ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿರಬೇಕು.