ಮೀನುಗಾರರಿಗೆ ವಸತಿ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು
ಮರಣ ಹೊಂದಿದ ಮೀನುಗಾರರ ಆವಲಂಬಿತರಿಗೆ ಹಾಗೂ ಶಾಶ್ವತ ಅಂಗವಿಕಲರಾದ ಮೀನುಗಾರರಿಗೆ: ರೂ.3.00 ಲಕ್ಷ ಪರಿಹಾರ
ಭಾಗಶಃ ಅಂಗವಿಕಲರಾದವರಿಗೆ: ರೂ.1.00 ಲಕ್ಷ ಪರಿಹಾರ
ಬಲೆಹಾನಿ, ದೋಣಿಹಾನಿ ಮತ್ತು ವೈದ್ಯಕೀಯ ವೆಚ್ಚಗಳಿಗೆ: ಗರಿಷ್ಠ ರೂ.1.00 ಲಕ್ಷ ಪರಿಹಾರ
ಮೀನುಗಾರಿಕೆ ಬಂದರು/ ಇಳಿದಾಣ ಕೇಂದ್ರದಲ್ಲಿ ಕೆಲಸದಲ್ಲಿದ್ದಾಗ ಮರಣ ಹೊಂದಿದಲ್ಲಿ: ರೂ.1.00 ಲಕ್ಷ ಪರಿಹಾರ
ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಪ್ರಕೃತಿ ವಿಕೋಪದಿಂದ ದೋಣಿ ಅವಘಡದಿಂದ ಮೃತರಾದ ಮೀನುಗಾರರ ಕುಟುಂಬದವರಿಗೆ: ರೂ 6.00 ಲಕ್ಷ ಪರಿಹಾರ
ಸಮುದ್ರದಲ್ಲಿ ಮೀನುಗಾರಿಕೆಗೆ ಹೋದಾಗ ಅನಾರೋಗ್ಯದಿಂದ ಮರಣ ಹೊಂದಿದಲ್ಲಿ: ರೂ.2.00 ಲಕ್ಷ ನೆರವು
ಮೀನುಗಾರರಿಗೆ
ದಾಖಲೆಗಳೊಂದಿಗೆ ಪ್ರಸ್ತಾವನೆ ಇಲಾಖೆಗೆ ಸ್ವೀಕೃತವಾದಲ್ಲಿ ಮಾನ್ಯ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 01
[email protected]
ದೂರವಾಣಿ: 080-22864681