ಮೀನುಗಾರರು ರೂ.50,000 ಗಳ ವರೆಗೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯಲು ಅವಕಾಶವಿರುತ್ತದೆ. ಪ್ಮರುಷರಿಗೆ 50,000 ರೂ.ಗಳವರೆಗೆ ಶೇ.2ರ ಬಡ್ಡಿ ದರದಲ್ಲಿ ವಾಣಿಜ್ಯ / ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಗಳಿಂದ ನೀಡುತ್ತಿದೆ ಮತ್ತು ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ.
ಮನೆ ನಿರ್ಮಾಣಕ್ಕೆ: ಸಾಮಾನ್ಯ ಮೀನುಗಾರರಿಗೆ ರೂ.1.20 ಲಕ್ಷ
ಮನೆ ನಿರ್ಮಾಣಕ್ಕೆ: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಗ್ರಾಮೀಣ ಪ್ರದೇಶದಲ್ಲಿ ರೂ 1.75 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ 2.00 ಲಕ್ಷ ಸಹಾಯಧನ ನೀಡಲಾಗುವುದು
ಮೀನುಗಾರರಿಗೆ
ಫಲಾನುಭವಿಯು ಹುಟ್ಟು : ವೃತ್ತಿಯಲ್ಲಿ ಮೀನುಗಾರನಾಗಿರಬೇಕು. ಮೀನುಗಾರಿಕೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಹ ಆಯ್ಕೆ ಮಾಡಬಹುದಾಗಿದೆ
ಫಲಾನುಭವಿಯು ವಿವಾಹಿತನಾಗಿರಬೇಕು
ಫಲಾನುಭವಿಯು ಸ್ವಂತ ನಿವೇಶನ ಹೊಂದಿರತಕ್ಕದ್ದು
ಫಲಾನುಭವಿಯು ಸ್ಥಳೀಯ ಮೀನುಗಾರರ ಸಹಕಾರ ಸಂಘದ ಸದಸ್ಯನಾಗಿರಬೇಕು. ಇಲ್ಲದಿದ್ದಲ್ಲಿ ಕಳೆದ ಮೂರು ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿರುವ ಬಗ್ಗೆ ಸಂಬಂಧಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ದೃಢೀಕರಿಸಬೇಕು
ಫಲಾನುಭವಿಯು ಸರ್ಕಾರದ ಇತರೆ ವಸತಿ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ, ನಗರ ಸಭೆ ಮುಂತಾದ ಸಂಸ್ಥೆಗಳಿಂದ ದೃಢೀಕರಣ ಹೊಂದಿರತಕ್ಕದ್ದು
ಫಲಾನುಭವಿಯು ಆರ್ಥಿಕವಾಗಿ ಹಿಂದುಳಿದವರಾಗಿರತಕ್ಕದ್ದು
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 01
[email protected]
ದೂರವಾಣಿ: 080-22864681