ತೋಟಗಾರಿಕೆ ಪ್ರದೇಶ ಅಭಿವೃದ್ಧಿ ಹಾಗೂ ನಿರ್ವಹಣೆ: ಆಯ್ಕೆಯಾದ ಗುಚ್ಚ ಪ್ರದೇಶಗಳಲ್ಲಿ ಬಹುವಾರ್ಷಿಕ ಪ್ರಮುಖ ಹಣ್ಣಿನ ಬೆಲೆಗಳಾದ ಮಾವು ಸಪೋಟ ಸೀಬೆ ನಿಂಬೆ ಜಾತಿಯ ಹಣ್ಣುಗಳು ಅನಾನಸ್ ಪಪ್ಪಾಯ ಬಾಳೆ ಇತ್ಯಾದಿ ಆಗ ಭೌಗೋಳಿಕವಾಗಿ ಗುರುತಿಸಲ್ಪಟ್ಟ ಬೆಳೆಗಳಾದ ಮೈಸೂರು ಮಲ್ಲಿಗೆ ಮೈಸೂರು ವೀಳ್ಯದೆಲೆ ನಂಜನಗೂಡು ರಸಬಾಳೆ ಹಡಗಲಿ ಮಲ್ಲಿಗೆ ಅಪ್ಪೆ ಮಿಡಿ ಮಾವ ಕಮಲಾಪುರ ಕೆಂಪು ಬಾಳೆ ಉಡುಪಿ ಮಲ್ಲಿಗೆ ಮುಟ್ಟುಗುಳ್ಳ ಬದನೆ ಕೊಡಗು ಕಿತ್ತಳೆ ಗುಲಾಬಿ ಈರುಳ್ಳಿ ಬೆಂಗಳೂರು ನೀಲಿ ದ್ರಾಕ್ಷಿ ದೇವನಹಳ್ಳಿ ಚಕೋತ ಇತ್ಯಾದಿ ಮತ್ತು ಹೊರಾವರಣಗಳಲ್ಲಿ ಸಾಗುವಳಿ ಮಾಡಲ್ಪಡುವ ತರಕಾರಿ ಹೂವಿನ ಬೆಳೆಗಳು ತಾಳೆ ತೋಟಗಳಲ್ಲಿ ಅಂತರ ಬೆಳೆಯನ್ನಾಗಿ ಬಾಳೆ ಮತ್ತು ಕಾಲು ಮೆಣಸು ಇತ್ಯಾದಿ ಬೆಳೆಗಳಿಗೆ ಸಹಾಯಧನ ನೀಡಲಾಗುವುದು
ಆಯ್ಕೆಯಾದ ತೋಟಗಾರಿಕಾ ಬೆಳೆಗಳನ್ನು ಕನಿಷ್ಠ ಐದು ಹೆಕ್ಟರ್ ನಿಂದ ಗರಿಷ್ಠ 40 ಹೆಕ್ಟರ್ ವರೆಗೆ ಬೆಳೆಯಬಹುದಾಗಿದೆ.
ಪ್ರತಿ ಫಲಾನುಭವಿಗಳಿಗೆ ಕನಿಷ್ಠ ಅರ್ಧ ಎಕರೆಯಿಂದ ಗರಿಷ್ಠ ಐದು ಎಕರೆಗಳ ವರೆಗೆ ಸಹಾಯಧನ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳಿಗೆ ಶೇಕಡ 90ರಷ್ಟು ಸಹಾಯಧನ ಸಣ್ಣ ಮತ್ತು ಅತಿ ಸಣ್ಣ ರೈತ ಫಲಾನುಭವಿಗಳಿಗೆ ಹಾಗೂ ಸಾಮಾನ್ಯ ಇತರೆ ರೈತ ಫಲಾನುಭವಿಗಳಿಗೆ ಶೇಕಡ 50ರಷ್ಟು ಸಹಾಯಧನ ನೀಡಲಾಗುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)