ಟೀ ಕಾಫಿ ರಬ್ಬರ್ ಹೊರತುಪಡಿಸಿ ಎಲ್ಲ ತೋಟಗಾರಿಕಾ ಬೆಳೆಗಳಿಗೆ ಸಹಾಯಧನ
ಸಂಪ್ರದಾಯಕವಾಗಿ ಅಡಿಕೆ ಬೆಳೆಯುವ ಜಿಲ್ಲೆಗಳಾದ ಮಲೆನಾಡು ಆಗ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಅಡಿಕೆ ಬೆಳೆಗೆ ನೀರಾವರಿ ತುಂತುರು ನೀರಾವರಿ ನಿಯಮಾನುಸರ ಸಹಾಯಧನ ನೀಡಲಾಗುವುದು.
ರೈತರಿಗೆ ಶೇಕಡ 40ರಷ್ಟು ಸಹಾಯಧನ ನೀಡುವ ಮೂಲಕ ಸೂಕ್ಷ್ಮ ನೀರಾವರಿ ಪದ್ದತಿಯನ್ನು ರೈತರ ಜಮೀನುಗಳಲ್ಲಿ ಅಳವಡಿಸಲು ಪ್ರೋತ್ಸಾಹಿಸಿ ಶೇಕಡ 50 ರಿಂದ 70ರಷ್ಟು ನೀರಿನ ಮಿತವೆಯ ಸಾಧಿಸುವುದು ವಿದ್ಯುತ್ ಶಕ್ತಿ ಮತ್ತು ಕೂಲಿ ವೆಚ್ಚದಲ್ಲಿ ಮಿತವ್ಯಯ ಸಾಧಿಸುವುದು.
ಸೂಕ್ಷ್ಮ ನೀರಾವರಿಯಲ್ಲಿ ರಸ್ತಾವರಿ ಪದ್ದತಿಯ ಮೂಲಕ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದರ ಮೂಲಕ ಶೇಕಡ 30 ರಿಂದ 40 ರಷ್ಟು ರಾಸಾಯನಿಕ ಗೊಬ್ಬರಗಳ ಮಿತವ್ಯ ಸಾಧಿಸುವುದು
ಬೆಳೆಗಳಲ್ಲಿ ಶೇಕಡ 30 ರಿಂದ ನೂರರಷ್ಟು ಹೆಚ್ಚು ಇಳುವರಿ ಹಾಗೂ ಉತ್ಪಾದಕತೆ ಸಾಧಿಸುವುದು
ವಿವಿಧ ವರ್ಗದ ರೈತರಿಗೆ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇಕಡ 50ರಷ್ಟು ಹಾಗೂ ಇತರ ರೈತರಿಗೆ ಶೇಕಡ 45ರಷ್ಟು ಸಹಾಯಧನ
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅಡಿಕೆ ತೆಂಗು ತೋಟಗಳಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಮಿಶ್ರ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಲ್ಲಿ ಅಂತಹ ರೈತರಿಗೆ ಆದ್ಯತೆ ನೀಡಲಾಗುವುದು.
ಮೈದಾನ ಪ್ರದೇಶಗಳಲ್ಲಿ ಬೋರ್ವೆಲ್ ಕಾಲುವೆ ನೀರು ಇತ್ಯಾದಿಗಳನ್ನು ಬೆಳೆಸಿ ಬೆಳೆದ ಅಡಿಕೆ ಬೆಳೆಗೆ ಹನಿ ನೀರಾವರಿ ಸಹಾಯಧನವನ್ನು ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)