ಸಾಹಿತಿ/ಕಲಾವಿದರುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ಇರುವ ವೈದ್ಯಕೀಯ ಗುರುತಿನ ಚೀಟಿ ನೀಡಿಕೆ ನಿಯಮಗಳು
ಯಾರಿಗೆ / ಅರ್ಹತೆ ?
ಯಾರಿಗೆ?
ಸಾಹಿತಿ/ಕಲಾವಿದರು
ಅರ್ಹತೆಗಳು/ಮಾನದಂಡಗಳು
ಸಾಹಿತ್ಯ, ಸಂಗೀತ ಇತರೆ ಕಲೆಗಾಗಿ ಕೇಂದ್ರ ಅಥವಾ ರಾಜ್ಯ ಪ್ರಶಸ್ತಿ ಪಡೆದವರು.
ರಾಜ್ಯ ಅಥವಾ ಕೇಂದ್ರ ಅಕಾಡೆಮಿಗಳಲ್ಲಿ ಪ್ರಶಸ್ತಿ ಪಡೆದವರು.
ಕೇಂದ್ರ ಅಥವಾ ರಾಜ್ಯದಿಂದ ಪುಸ್ತಕ ಬಹುಮಾನ ಪಡೆದವರು.
ಮಾಜಿ ಅಥವಾ ಹಾಲಿ ಕೇಂದ್ರ ಅಥವಾ ರಾಜ್ಯ ಸಾಹಿತ್ಯ-ಸಂಗೀತ-ಕಲಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಇತರ ಪ್ರತಿಷ್ಠಿತ ಕನ್ನಡ ಪರ ಸಂಘಗಳ ಸಾಹಿತಿ ಲೇಖಕ ಅಧ್ಯಕ್ಷರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಸಂಗೀತೋತ್ಸವ ಸಮ್ಮೇಳನದ ಅಧ್ಯಕ್ಷರು.
ಸಾಹಿತ್ಯ ಹಾಗೂ ಕಲೆಗಾಗಿ ವಿಶಿಷ್ಟ ಸೇವೆ ಸಲ್ಲಿಸಿದವರು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಸಾಹಿತಿ/ಕಲಾವಿದರು ಸಂಬಂಧಪಟ್ಟ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿಮಾಡಿ, ಭಾವಚಿತ್ರ ಅಂಟಿಸಿ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು.
ಸಂಪರ್ಕ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
ಕರ್ನಾಟಕ – 560002