ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಸೇವೆಸಲ್ಲಿಸಿ ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಿಕ ರೂ: 1,500/-ಗಳ ಮಾಸಾಶನ
ಯಾರಿಗೆ / ಅರ್ಹತೆ ?
ಯಾರಿಗೆ?
ಸಾಹಿತಿ/ಕಲಾವಿದರಿಗೆ
ಅರ್ಹತೆಗಳು/ಮಾನದಂಡಗಳು
ನಿಗದಿತ ಮಾಸಾಶನ ಅರ್ಜಿಯನ್ನು ಆಯಾಯ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಮೂಲಕ ಸಲ್ಲಿಸಬೇಕು.
ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ ಮತ್ತು ಯಕ್ಷಗಾನ, ಲಲಿತಕಲೆ, ಶಿಲ್ಪಕಲೆಗಳಲ್ಲಿ 25ವರ್ಷಗಳ ಕಾಲ ಗಣನೀಯ ಸೇವೆಸಲ್ಲಿಸಿ ಕಷ್ಟಪರಿಸ್ಥಿಯಲ್ಲಿರುವವರು ಮಾಸಾಶನ ಪಡೆಯಲು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಸಾಹಿತಿ ಕಲಾವಿದರ ವಯಸ್ಸು 58 ವರ್ಷಗಳಾಗಿರಬೇಕು. ವಯಸ್ಸಿನ ಬಗ್ಗೆ ಶಿಕ್ಷಣ ಸಂಸ್ಥೆ ನೀಡಿದ ಅಥವಾ ಕೋರ್ಟಿನಿಂದ ಪಡೆದ ಅಫಿಡವಿಟ್ ಅನ್ನು ಸಲ್ಲಿಸಬೇಕು
ಕಲಾವಿದರು ತಹಶೀಲ್ದಾರ್ರಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರ ನೀಡಬೇಕು (ಗ್ರಾಮಾಂತರ ಪ್ರದೇಶಗಳಿಗೆ ರೂ.40.000-00 ಹಾಗೂ ಪಟ್ಟಣ ಪ್ರದೇಶಗಳಿಗೆ ರೂ.50,000-00 ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರಬೇಕು).
ಅಂಗವಿಕಲ ಕಲಾವಿದರಿಗೆ ವಯಸ್ಸು 40ವರ್ಷಗಳಾಗಿದ್ದರೆ ಅಥವಾ 20 ವರ್ಷಗಳ ಸೇವೆ ಸಲ್ಲಿಸಿದ್ದರೆ, ಮಾಸಾಶನ ಮಂಜೂರಾತಿಗೆ ಅರ್ಜಿಯನ್ನು ಪರಿಗಣಿಸಲಾಗುವುದು ಇಂತಹ ಕಲಾವಿದರು ಅಂಗವಿಕಲತೆಯ ಬಗ್ಗೆ ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು.
ವೃದ್ಧಾಪ್ಯ ವೇತನ, ವಿಧವಾವೇತನ, ಅಂಗವಿಕಲರ ಮಾಸಾಶನ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಿಂಚಣಿ ಇತ್ಯಾದಿಗಳನ್ನು ಪಡೆಯುತ್ತಿದ್ದು, ನಿಗದಿತ ಮಾಸಾಶನ ಹಣವೂ ಸೇರಿದಂತೆ ಆದಾಯ ಮಿತಿಯನ್ನು ಮೀರಬಾರದು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಅರ್ಜಿದಾರರು ಮೂರು ಬಣ್ಣಗಳುಳ್ಳ ತ್ರಿಪ್ರತಿಯ ಮಾಸಾಶನ ಅರ್ಜಿಯನ್ನು ಅವರ ಸಹಿ ಮತ್ತು ಸರಿಯಾದ ವಿಳಾಸದೊಂದಿಗೆ ಭರ್ತಿಮಾಡಿ ಅವಶ್ಯ ದಾಖಲೆಗಳೊಂದಿಗೆ, ಅವರ ಕಲಾಸೇವೆಯ ಸಾಧನೆಗಳ ಮೂಲ ಪ್ರಮಾಣ ಪತ್ರಗಳನ್ನು, ಇಲ್ಲವೇ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ದಾಖಲೆಗಳನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರುಗಳಿಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಇತ್ತಿಚಿನ ಎರಡು ಭಾವಚಿತ್ರಗಳನ್ನು ಲಗತ್ತಿಸಿರಬೇಕು. ಭಾವಚಿತ್ರಗಳಿಗೆ ಗೆಜೆಟೆಡ್ ಅಧಿಕಾರಿಯ ದೃಢೀಕರಣವಿರಬೇಕು.
ಸಂಪರ್ಕ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
ಕರ್ನಾಟಕ – 560002