ಗಿರಿಜನ ಉಪಯೋಜನೆಗಳು: ಪರಿಶಿಷ್ಟ ಪಂಗಡದ (ಎಸ್.ಟಿ) ಕಲಾವಿದರು ಮತ್ತು ಸಂಸ್ಥೆಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಮತ್ತು ಆರ್ಥಿಕ ನೆರವು.
ಸಂಗೀತ ತರಬೇತಿ: ಪರಿಶಿಷ್ಟ ಜಾತಿ ಪಂಗಡಗಳ ವಿದ್ಯಾರ್ಥಿ ಅವರು ವ್ಯಾಸಂಗ ಮಾಡುತ್ತಿರುವ ವಸತಿ ನಿಲಯಗಳಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ , ವಾದ್ಯ ಸಂಗೀತ ,ಗಮಕ ಕಲೆಗಳಲ್ಲಿ ತರಬೇತಿ ನೀಡಲಾಗುವುದು.
ಸಾಂಸ್ಕೃತಿಕ ಪರಿಕರಗಳಿಗೆ ಧನಸಹಾಯ ಪರಿಶಿಷ್ಟ ಜಾತಿ ಪಂಗಡಗಳ ಕಲಾವಿದರು ಅಥವಾ ಸಂಘ ಸಂಸ್ಥೆಗಳಿಗೆ ಅವುಗಳ ಕಲಾ ಪೋಷಣೆಗೆ ಅಗತ್ಯವೆನಿಸುವ ವಾದ್ಯ ಪರಿಕರಗಳನ್ನು, ರಂಗಪರಿಕರಗಳನ್ನು, ವೇಷಭೂಷಣಗಳನ್ನು ಹಾಗೂ ಪೀಠೋಪಕರಣಗಳನ್ನು ಖರೀದಿಸಲು ಧನ ಸಹಾಯ ನೀಡಲಾಗುವುದು.
ಸಾಂಸ್ಕೃತಿಕ ಉತ್ಸವ, ವಿಚಾರ ಸಂಕಿರಣಗಳಿಗೆ ಧನಸಹಾಯ
ಪರಿಶಿಷ್ಟ ಜಾತಿ ಪಂಗಡದ ಕಲಾವಿದರಿಗೆ ನೋಂದಾಯಿತ ಸಂಘ ಸಂಸ್ಥೆಗಳು ಏರ್ಪಡಿಸುವ ಕಲಾಮೇಶ ,ಸಾಂಸೃತಿಕ ಉತ್ಸವ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲು ಧನಸಹಾಯ ನೀಡಲಾಗುವುದು.
ಯಾರಿಗೆ / ಅರ್ಹತೆ ?
ಯಾರಿಗೆ?
ಪರಿಶಿಷ್ಟ ಪಂಗಡದ ಎಸ್.ಟಿ. ಕಲಾವಿದರು
ಅರ್ಹತೆಗಳು/ಮಾನದಂಡಗಳು
ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸೇವೆ ಸಲ್ಲಿಸಿರುವ ಕಲಾವಿದರಿಗೆ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ ಜಯಚಾಮರಾಜ ರಸ್ತೆ ಬೆಂಗಳೂರು ,
ಕರ್ನಾಟಕ – 560002