ನೋಂದಾಯಿತ ಕಟ್ಟಡ ಕಾರ್ಮಿಕನಿಗೆ ಕೆಲಸ ಮಾಡುವ ಸಮಯದಲ್ಲಿ ಅಪಘಾತವಾದಾಗ, ಅವನಿಗೆ / ಅವಳಿಗೆ ಕಾರ್ಮಿಕರ ನಷ್ಠ ಪರಿಹಾರ ಕಾಯ್ದೆ, 1923 ರ ಪ್ರಾವಧಾನಗಳಡಿ ಸಂಸ್ಥೆಯ ನಿಯೋಜಕನು ಅಪಘಾತ ಪರಿಹಾರವನ್ನು ನೀಡಬೇಕಾಗುತ್ತದೆ. ಜೊತೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 106 ಎಲ್ ಇಟಿ 2019 ಬೆಂಗಳೂರು ದಿನಾಂಕ: 01-10-2019 ರಂತೆ ಮಂಡಳಿಯಿಂದ 2-ಲಕ್ಷ ರೂಗಳ ಪರಿಹಾರ ಸಹಾಯಧನ ನೀಡಲಾಗುತ್ತಿದೆ. ಆದರೆ, ಒಂದು ವೇಳೆ ಆತನ ಅವನ/ಅವಳ ಉದ್ಯೋಗ ಸ್ಥಳದಿಂದ ಹೊರಗೆ ಅಪಘಾತ ಸಂಭವಿಸಿದರೆ, ಆ ಫಲಾನುಭವಿಗೆ ಮಂಡಳಿಯಿಂದ ಈ ನಿಯಮದಡಿಯಲ್ಲಿ ಅಪಘಾತ ಪರಿಹಾರ ಧನವನ್ನು ನೀಡಬೇಕಾಗುತ್ತದೆ.
ಅಪಘಾತ ಪರಿಹಾರ ಸಹಾಯಧನವನ್ನು ಪಡೆಯಲು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ.