ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)
ಮೇ 3, 2024ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ
ಮೇ 3, 2024
ಸೌಲಭ್ಯಗಳು
- ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು/ಳು ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವನಿಗೆ/ಅವಳಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000/-ಗಳನ್ನು ದುರ್ಬಲತೆ ಪಿಂಚಣಿಯನ್ನಾಗಿ ಮಂಜೂರು ಮಾಡಲಾಗುತ್ತದೆ. ರೂ.2 ಲಕ್ಷದ ಮೊತ್ತವನ್ನು ಮೀರದೇ, ಅವನ / ಅವಳ ಶೇಡಾವಾರು ದುರ್ಬಲತೆಗೆ ಅನುಗುಣವಾಗಿ ಈ ಕೆಳಕಂಡ ಷರತ್ತು ನಿಭಂದನೆಗಳಿಗೆ ಒಳಪಟ್ಟು ದುರ್ಬಲರಿಗೆ ಪರಿಹಾರ ಸಹಾಯಧನ ಮಂಜೂರು ಮಾಡಬಹುದಾಗಿರುತ್ತದೆ.
ಅರ್ಜಿ ಸಲ್ಲಿಕೆ
- ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
- ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಗುರುತು ಚೀಟಿಯ ಛಾಯಾಪ್ರತಿ ನೀಡತಕ್ಕದ್ದು
- ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು
- ಪ್ರತಿವರ್ಷ ಜೀವಿತ ಪ್ರಮಾಣ ಪತ್ರ ನೀಡತಕ್ಕದ್ದು
- ರೇಷನ್ ಕಾರ್ಡ್ ನೀಡತಕ್ಕದ್ದು
- ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು
- ವೈದ್ಯಕೀಯ ವರದಿ
- ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಪಡೆದ, ದೃಢೀಕರಿಸಲ್ಪಟ್ಟ ಗುರುತಿನ ಚೀಟಿಯನ್ನು ಲಗತ್ತಿಸತಕ್ಕದ್ದು
- ದುರ್ಬಲತೆಗೊಳಗಾದ ಫಲಾನುಭವಿಯ ಭಾವಚಿತ್ರ ಲಗತ್ತಿಸತಕ್ಕದ್ದು
- ಫಲಾನುಭವಿಯು ಸಕ್ಷಮ ಪ್ರಾಧಿಕಾರದಿಂದ ದುರ್ಬಲತೆಯ ಗುರುತಿನ ಚೀಟಿಯನ್ನು ಪಡೆದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
- ಫಲಾನುಭವಿ ಮರಣ ಹೊಂದಿದ ಪಕ್ಷದಲ್ಲಿ, ನಾಮ ನಿರ್ದೇಶಿತರು ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ನೀಡತಕ್ಕದ್ದು