ದುರ್ಬಲತೆ ಪಿಂಚಣಿ
ಮೇ 3, 2024ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
ಮೇ 3, 2024
ಸೌಲಭ್ಯಗಳು
- ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.71,000/- ಗಳನ್ನು (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಶಾಸನಬದ್ಧ ನಾಮನಿರ್ದೇಶಿತನಿಗೆ ಮಂಜೂರು ಮಾಡುವುದು. ನೋಂದಾಯಿತ ಕಟ್ಟಡ ಕಾರ್ಮಿಕನ ನಾಮನಿರ್ದೇಶಿತನು ಮರಣ ಪ್ರಮಾಣಪತ್ರ ಹಾಗೂ ಮೂಲ ಗುರುತಿನ ಚೀಟಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ
- ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
- ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮನಿರ್ದೇಶಿತರ (ನಾಮಿನಿ) ಬ್ಯಾಂಕ್ ಪಾಸ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು
- ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಮರಣ ಪ್ರಮಾಣಪತ್ರ ನೀಡತಕ್ಕದ್ದು
- ರೇಷನ್ ಕಾರ್ಡ್ ನೀಡತಕ್ಕದ್ದು
- ಆಧಾರ್ ಕಾರ್ಡ್ ನೀಡತಕ್ಕದ್ದು
- ಉದ್ಯೋಗದ ದೃಢೀಕರಣ ಪತ್ರ ನೀಡತಕ್ಕದ್ದು
- ನಾಮನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ (ಯಾವುದಾದರೊಂದು) ಛಾಯಾಪ್ರತಿ ನೀಡತಕ್ಕದ್ದು
- ಫಲಾನುಭವಿ ಮರಣವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿವುದು