ಮದುವೆ ಸಹಾಯ ಧನ (ಗೃಹ ಲಕ್ಷ್ಮೀ ಬಾಂಡ್)
ಮೇ 3, 2024ದುರ್ಬಲತೆ ಪಿಂಚಣಿ
ಮೇ 3, 2024
ಸೌಲಭ್ಯಗಳು
- ಹೃದ್ರೋಗ, ಕೋವಿಡ್-19, ಕಿಡ್ನಿ ಜೋಡಣೆ, ಕ್ಯಾನ್ಸ್ ರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ,ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸ್ ರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ಇಎನ್.ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನರರೋಗ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ (ಮಂಡಳಿಯಿಂದ ಪರಿಗಣಿಸಲ್ಪಡುವ ಇತರೆ ಪ್ರಮುಖ ಖಾಯಿಲೆಗಳು ಮತ್ತು ಔದ್ಯೋಗಿಕ ಖಾಯಿಲೆಗಳು)
- ವೈಧ್ಯಕೀಯ ವೆಚ್ಚದ ಸಹಾಯಧನದ ಮೊತ್ತ ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿ ಪ್ರತಿ ಸೇವೆಗೆ ಸೂಚಿಸಿರುವ ದರಗಳಿಗೆ ಅನುಗುಣವಾಗಿ ಗರಿಷ್ಠ ರೂ.2 ಲಕ್ಷಗಳವರೆಗೂ ಮಂಜೂರು ಮಾಡುವುದು.
ಅರ್ಜಿ ಸಲ್ಲಿಕೆ
- ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ)
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಖಾತೆಯ ಪುರಾವೆ
- ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
- ಪೂರಕ ದಾಖಲಾತಿಗಳು: ಫಲಾನುಭವಿಯು/ಅವಲಂಬಿತ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್ 1ಗೆ ಸೇರಿದ ) ಖಾಸಗಿ ಆಸ್ಪತ್ರೆಗಳಲ್ಲಿ ದಾಖಲೆಯಾಗಿರುವ ಬಗ್ಗೆ
- ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು.
- ನಮೂನೆ 22-ಎ
- ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು