ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ ಮತ್ತು ಅವನ ಅವಲಂಬಿತರು ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಅಥವಾ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಆಸ್ವತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ. ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾದಾಗ, ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗಿರುತ್ತದೆ. ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000/- (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮಿತಿಗೆ ಒಳಪಟ್ಟು ಸಹಾಯಧನ ಮಂಜೂರು ಮಾಡಬೇಕಾಗುತ್ತದೆ.