ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)
ಮೇ 3, 2024ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)
ಮೇ 3, 2024
ಸೌಲಭ್ಯಗಳು
- ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ ಮೂರು ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕಾಂಶದ ಪೂರೈಕೆಗಾಗಿ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾಳೆ.
- ಒಟ್ಟು ಮೊತ್ತವು ರೂ.6000/- ಗಳು ಆಗಿರುತ್ತದೆ. (ಪ್ರತಿ ತಿಂಗಳು 500/- ರೂ.ಗಳಂತೆ ಅಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗೆ ಮಂಜೂರು ಮಾಡಬೇಕು).
- ನೋಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಮೊದಲ ಎರಡು ಮಕ್ಕಳ ಜನನಕ್ಕಾಗಿ ಮಾತ್ರ).
- ಅರ್ಜಿಯು ಜನನ ಮತ್ತು ಮರಣ ನೋಂದಾಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು.
- ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ
- ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ)
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಖಾತೆಯ ಪುರಾವೆ
- ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
- ಮಂಡಳಿ ನೀಡಿರುವ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ (ದೃಢೀಕೃತ )
- ಮಕ್ಕಳ ಛಾಯಾಚಿತ್ರ
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಖಾತೆ ಪುರಾವೆ
- ಡಿಸ್ಚಾರ್ಜ್ ಸಾರಾಂಶ
- ಮಗುವಿನ ಜನನ ಪ್ರಮಾಣಪತ್ರ
- ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
- ಮೂರು ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸತಕ್ಕದ್ದು
- ಮಗುವಿನ ಜೀವಿತ ಕುರಿತು ಪ್ರತಿ (ಎರಡು ಹಾಗೂ ಮೂರನೇ ವರ್ಷ) ವರ್ಷ ಅಫಿಡೆವಿಟ್ ಸಲ್ಲಿಸತಕ್ಕದ್ದು