ಸ್ವ-ಸಹಾಯ ಗುಂಪಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತಹ ಸಂಘಟಿತ ಗುಂಪು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 10 ರಿಂದ 20 ಸದಸ್ಯರನ್ನು ಹೊಂದಿದ್ದು, ಅದರ ಸದಸ್ಯರು ಹಣಕಾಸು ಮಿತವ್ಯಯ ಚಟುವಟಿಕೆಯಲ್ಲಿ (thrift activity) ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿರಬೇಕು. ಅಂತಹ ಸಂಘದ ಸದಸ್ಯರು ತಮ್ಮಲ್ಲಿ ಇಬ್ಬರನ್ನು ಪ್ರತಿನಿಧಿ-01 ಮತ್ತು ಪ್ರತಿನಿಧಿ-02 ಆಗಿ ಆಯ್ಕೆಮಾಡಿಕೊಂಡಿರಬೇಕು. ಪ್ರತಿನಿಧಿಗಳು ಸ್ವ-ಸಹಾಯ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕಿನಿಂದ ತಮ್ಮನ್ನು ‘ಅಧಿಕೃತ ರುಜುದಾರರು’ ಎಂಬ ಮಾನ್ಯತೆ ಪಡೆದಿರಬೇಕು. ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಮಹಿಳೆಯರು ರೂಪಿಸಿಕೊಂಡ ಸ್ವ-ಸಹಾಯ ಗುಂಪಿಗೆ ಪ್ರಾಶಸ್ಯ್ತಾ ಕೊಡಲಾಗುವುದು. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರು ಪ್ರಾರಂಭಿಸಬಯಸುವ ಸಣ್ಣ ವ್ಯಾಪಾರ ಅಂದರೆ, ತಳ್ಳುವ ಗಾಡಿಯಲ್ಲಿ ತರಕಾರಿ/ಹಣ್ಣು ಮಾರಾಟ, ಕಲಾಯಿ ಮಾಡುವಿಕೆ, ಹಾಸಿಗೆ ಮಾಡುವಿಕೆ, ಪಾನ್ ಶಾಪ್, ಕಡ್ಲೆಕಾಯಿ ವ್ಯಾಪಾರ, ಸೈಕಲ್ ರಿಪೇರಿ, ಗ್ಯಾಸ್/ಆರ್ಕ್ ವೆಲ್ಡಿಂಗ್, ವಲ್ಕನೈಸಿಂಗ್, ಮೀನು ಮಾರಾಟ, ಟೀ ಶಾಪ್ ಮುಂತಾದುವುಗಳಿಗೆ ನಿಗಮವು ಪ್ರತಿ ಸದಸ್ಯನಿಗೆ ರೂ.10,000/- ಸಾಲ ಸೌಲಭ್ಯವನ್ನು (ರೂ.5,000/- ಸಾಲ ಮತ್ತು ರೂ.5,000/- ಸಹಾಯಧನ) ನೀಡುತ್ತದೆ. ನಿಗಮದಿಂದ ಸಾಲವನ್ನು ಸ್ವ-ಸಹಾಯ ಗುಂಪಿಗೆ ನೇರವಾಗಿ ಮಂಜೂರು ಮಾಡಲಾಗುವುದು. ನಂತರ ಅಂತಹ ಸ್ವ-ಸಹಾಯ ಗುಂಪು, ತಮ್ಮ ಸದಸ್ಯರಿಗೆ ಸಾಲವನ್ನು ಬಿಡುಗಡೆ ಮಾಡುಬೇಕು. ಸಾಲವನ್ನು ಶೇ.5ರ ಬಡ್ಡಿದರದಲ್ಲಿ 36 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ, ಶೇ.50ರಷ್ಟು ಬ್ಯಾಕ್ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.
ಸರ್ಕಾರಿ ಆದೇಶದಲ್ಲಿ ಸೂಚಿಸಿರುವಂತೆ ಫಲಾನುಭವಿಯು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
ಆನ್ ಲೈನ್ ಅರ್ಜಿ
ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
kmdc.kar.nic.in/loan/login.aspx
ಸಹಾಯವಾಣಿ: 8277799990