ಸ್ಮಾರ್ಟ್ ಕಾರ್ಡ್ ಸೌಲಭ್ಯ:11 ಅಸಂಘಟಿತ ವಲಯಗಳಾದ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರನ್ನು ಏಕ ಶೀರ್ಷಿಕೆ ಮತ್ತು ಏಕ ಚಿಹ್ನೆಯಡಿ ನೋಂದಾಯಿಸಿ “ ಸ್ಮಾರ್ಟ್ ಕಾರ್ಡ್ ಸೌಲಭ್ಯ ನೀಡಲಾಗುವುದು
ಶ್ರಮ ಸಮ್ಮಾನ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ:11 ಅಸಂಘಟಿತ ವಲಯಗಳಾದ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ” ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ವಲಯಕ್ಕೆ ತಲಾ 1 ರಂತೆ ಪ್ರತಿ ಜಿಲ್ಲೆಗೆ 11 ರಂತೆ ಒಟ್ಟು 330 ಕಾರ್ಮಿಕರಿಗೆ “ಶ್ರಮ ಸಮ್ಮಾನ ಪ್ರಶಸ್ತಿ” ಹಾಗೂ ವಲಯಕ್ಕೆ ತಲಾ 10 ರಂತೆ ಪ್ರತಿ ಜಿಲ್ಲೆಗೆ 110 ರಂತೆ ಒಟ್ಟು 3300 ಕಾರ್ಮಿಕರಿಗೆ “ವಿಶೇಷ ಪುರಸ್ಕಾರ” ನೀಡಲಾಗುತ್ತಿದೆ
ಕಾರ್ಮಿಕ ಸೇವಾ ಕೇಂದ್ರ: ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ಎಲ್ಲಾ ಯೋಜನೆಗಳ ಕುರಿತು ಮಾಹಿತಿ ನೀಡಲು, ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಶ್ಯಕವಿರುವ ದಾಖಲಾತಿಗಳನ್ನು ಸಿದ್ಧಪಡಿಸಲು ಹಾಗೂ ನಿಗಧಿಪಡಿಸಿದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಪಟ್ಟವರಿಗೆ ರವಾನಿಸಲು ಸಹಾಯ ಮಾಡುತದೆ
ಭವಿಷ್ಯನಿಧಿ ಸೌಲಭ್ಯ:ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಠಿಯಿಂದ ವಂತಿಕೆ ಆಧಾರಿತ ಭವಿಷ್ಯನಿಧಿ ಸೌಲಭ್ಯ ನೀಡಲಾಗುತ್ತಿದೆ
ವಿದೇಶಿ ಉದ್ಯೋಗ ಕೋಶ International Migration Centre-Karnataka(IMCK): ಪ್ರತಿ ವರ್ಷ ರಾಜ್ಯದಾದ್ಯಂತ ಪರಿಣಿತ, ಅರೆಪರಿಣಿತ ಹಾಗೂ ಪರಿಣಿತರಲ್ಲದ ಸಹಸ್ರಾರು ಕಾರ್ಮಿಕರು ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುತ್ತಿದ್ದು, ಮಧ್ಯವರ್ತಿ ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುತ್ತಿರುವುದನ್ನು ಗಮನಿಸಿ ಅವರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ವಿದೇಶಿ ಉದ್ಯೋಗ ಕೋಶ (International Migration Centre-Karnataka(IMC-K)) ವನ್ನು ಸ್ಥಾಪಿಸಲು ನಿರ್ಧರಿಸಿದ್ದು, ಅರೆಪರಿಣಿತ ಹಾಗೂ ಪರಿಣಿತರಲ್ಲದ ಕಾರ್ಮಿಕರಿಗೆ ಸಂಬಂಧಪಟ್ಟ ಹೊಣೆಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ವಹಿಸಿಕೊಂಡಿದೆ.
ಈ ದಿಶೆಯಲ್ಲಿ Protector General of Emigrants (PGE), Ministry of External Affairs (MEA) ಭಾರತ ಸರ್ಕಾರ ಇವರೊಂದಿಗೆ ವ್ಯವಹರಿಸಲಾಗಿದ್ದು, ಮಂಡಳಿಯನ್ನು Recruitment Agency(RA) ಆಗಿ ಪರಿಗಣಿಸಲು ಒಪ್ಪಿಕೊಂಡಿರುವುದಾಗಿ ದಿನಾಂಕ:27-06-2019 ರಂದು ಇ-ಮೇಲ್ ಮೂಲಕ ತಿಳಿಸಿರುತ್ತಾರೆ ಹಾಗೂ ಈ ಕುರಿತು ರಾಷ್ಟ್ರೀಕೃತ ಬ್ಯಾಂಕ್ನಿಂದ ರೂ.50.00 ಲಕ್ಷಗಳ ಗ್ಯಾರಂಟಿ ನೀಡುವಂತೆ ತಿಳಿಸಿದ್ದು, ಸದರಿ ಪ್ರಮಾಣ ಪತ್ರವು 8 ವರ್ಷಗಳ ಅವಧಿಗೆ ಊರ್ಜಿತದಲ್ಲಿರುವುದಾಗಿ ತಿಳಿಸಿರುತ್ತಾರೆ.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಕಾರ್ಮಿಕರಿಗೆ
ಅರ್ಹತೆಗಳು/ಮಾನದಂಡಗಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಲ್ಲಿಸಬೇಕಾದ ದಾಖಲೆಗಳು
ಸಂಪರ್ಕ
4ನೇ ಮಹಡಿ, ವಿಕಾಸ ಸೌಧ,
ಡಾ: ಬಿ.ಆರ್. ಅಂಬೇಡ್ಕರ್ ವಿಧಿ,
ಬೆಂಗಳೂರು-01.