ರಾಜ್ಯದ ಎಲ್ಲಾ ಮನೆಗಳಿಗೂ ಶುದ್ಧ ನೀರನ್ನು ಒದಗಿಸುವುದಕ್ಕೋಸ್ಕರ ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ (JJM) ಅನ್ನು ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯ ಪ್ರಮುಖ ಅಂಶಗಳು:
ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸುವುದು
55 lpcd ನೀರನ್ನು ಒದಗಿಸುವ ಸಲುವಾಗಿ ನೀರಿನ ಮೂಲಗಳ ಸುಸ್ಥಿರತೆ ಕಾಪಾಡುವುದು.
ಶುದ್ಧ ನೀರಿನ ಖಾತ್ರಿಗಾಗಿ ಹೊಸ ತಂತ್ರಜ್ಞಾನವನ್ನು ಬಳಸುವುದು
ತ್ಯಾಜ್ಯ ನೀರನ್ನು ನಿರ್ವಹಣೆ ಮಾಡುವುದು
ಬೆಂಬಲ ಚಟುವಟಿಕೆಗಳಾದ IEC ಮತ್ತು HRD ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು
ಕುಡಿಯುವ ನೀರಿನ ಪರೀಕ್ಷೆ ಮತ್ತು ಕಣ್ಗಾವಲಿನ ವ್ಯವಸ್ಥೆ ಮಾಡುವುದು