ಬಂಡೂರು, ಡೆಕ್ಕನಿ, ಬಳ್ಳಾರಿ, ಕೆಂಗುರಿ, ಹಾಸನ ಕುರಿ ತಳಿಗಳು ಮೌಲ್ಯಯುತ ದೇಶೀಯ ತಳಿಗಳಾಗಿದ್ದು ಆಯಾ ಪ್ರದೇಶದ ಹವಾಮಾನ ಪರಿಸರಕ್ಕೆ ಹೊಂದಿಕೊಂಡು ಸಾವಿರಾರು ವರ್ಷಗಳಿಂದ ವಿಕಾಸಗೊಂಡ ತಳಿಗಳಾಗಿವೆ. ವೈಜ್ಞಾನಿಕ ಕ್ರಮದಲ್ಲಿ ನಿರ್ವಹಣೆ ಮಾಡಿದರೆ ಅವುಗಳು ಒಳ್ಳೆಯ ಬೆಳವಣಿಗೆ ನೀಡುವ ತಳಿಗಳಾಗಿವೆ. ಇದನ್ನು ಪರಿಗಣಿಸಿದ ಕರ್ನಾಟಕ ಸರ್ಕಾರ ಕುರಿ ಮತ್ತು ಮೇಕೆ ತಳಿ ಸಂವರ್ದನಾ ನೀತಿಯನ್ನು ಅಂಗೀಕರಿಸಿದೆ. ಅದರಂತೆ ಆಯಾಯ ಜಿಲ್ಲೆಗಳಲ್ಲಿ ಪ್ರಚಲಿತವಿರುವ ದೇಶೀಯ ತಳಿ ಕುರಿ ಮೇಕೆಗಳನ್ನು ಅದೇ ತಳಿಯ ಶುದ್ದ ಟಗರು, ಹೋತಗಳಿಂದ ಸಂವರ್ಧನೆ ಮಾಡಲು ಶಿಫಾರಸ್ಸು ಮಾಡಲಾಗಿದೆ. ಆದ್ದರಿಂದ ನಿಗಮ ಕೂಡ ಇದೇ ದಿಕ್ಕಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ.
ಹಾಗಾಗಿ ಕುರಿಮೇಕೆ ಪಾಲಕರು ಕನಿಷ್ಟ ಮೂರು ವರ್ಷಕೊಮ್ಮೆ ತಳಿ ಸಂವರ್ಧನೆಗೆ ಬಳಸುವ ಟಗರು, ಹೋತವನ್ನು ಬದಲಾಯಿಸಬೇಕು. ಅವರವರ ಹಿಂಡಿನಲ್ಲಿ ಹುಟ್ಟಿದ ಟಗರು, ಹೋತವನ್ನು ತಳಿ ಸಂವರ್ಧನೆಗೆ ಬಳಸಬಾರದು. ಟಗರು ಬದಲಾಯಿಸದೆ ಇದ್ದಲ್ಲಿ ಅಥವಾ ಹಿಂಡಿನಲ್ಲಿ ಹುಟ್ಟಿದ ಟಗರನ್ನೇ ತಳಿ ಸಂವರ್ಧನೆಗಾಗಿ ಬಳಸಿದ್ದಲ್ಲಿ, ಒಳಸಂಕರಣವಾಗಿ ಹುಟ್ಟಿದ ಮರಿಗಳು ಸಾಯುವುದು, ಕಡಿಮೆ ತೂಕದ ಮರಿಗಳು ಹುಟ್ಟುವುದು, ರೋಗ ತಡೆಗಟ್ಟುವ ಶಕ್ತಿ ಕಡಿಮೆಯಾಗುವುದು, ಮರಣ ಸಂಭವಿಕೆ ಹೆಚ್ಚಾಗುವುದು – ಕಂಡುಬರುತ್ತದೆ. ಒಳಸಂಕರಣ ತಡೆಗಟ್ಟಿದರೆ, ಭವಿಷ್ಯದಲ್ಲಿ ನಮ್ಮ ದೇಶಿತಳಿಗಳು ಉತ್ಕøಷ್ಟ ತಳಿಗಳಾಗಿ ಮಾರ್ಪಡುತ್ತವೆ ಎಂಬ ನಿಲುವಿನೊಂದಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಒಳಸಂಕರಣದಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಹಲವು ಮಾಧ್ಯಮಗಳ ಮೂಲಕ ಕುರಿಗಾರರಲ್ಲಿ ಜಾಗೃತಿ ಉಂಟುಮಾಡಲಾಗುತ್ತಿದೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ಕುರಿ ಭವನ, ಹೆಬ್ಬಾಳ, ಬೆಂಗಳೂರು-24