ಸುತ್ತುನಿಧಿ : ಹೊಸ ಮತ್ತು ಬ್ಯಾಂಕ್ ಸಾಲ ಪಡೆಯದ ಸ್ವಸಹಾಯ ಗುಂಪುಗಳಿಗೆ, ಬ್ಯಾಂಕ್ ಸಾಲ ಪಡೆಯಲು ಅನುವಾಗುವಂತೆ ಮತ್ತು ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಅರ್ಹ ಗುಂಪುಗಳನ್ನು ಗುರ್ತಿಸಿ, ಶ್ರೇಣೀಕರಣ ಮಾಡಿ ಗರಿಷ್ಟ ರೂ. 15000/- ಗಳನ್ನು ಅನುದಾನದ ರೂಪದಲ್ಲಿ ಒದಗಿಸುವುದು
ಸಮುದಾಯ ಬಂಡವಾಳ ನಿಧಿ: (ಸಿ.ಐ.ಎಫ್) ಒಕ್ಕೂಟಗಳ ಸುಸ್ಥಿರತೆಯನ್ನು ಬೆಂಬಲಿಸಲು ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುವುದು.
ಸಮುದಾಯ ಬಂಡವಾಳ ನಿಧಿಯನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ರೂ.1,25,000 ಹಾಗೂ ಇತರೆ ಗುಂಪುಗಳಿಗೆ ರೂ.75,000/-ಗಳನ್ನು ನೀಡಲಾಗುತ್ತಿದೆ.
ಸ್ವಸಹಾಯ ಗುಂಪುಗಳ ಬ್ಯಾಂಕ್ ಲಿಂಕೇಜ್ : ಸುತ್ತು ನಿದಿ, ಸಮುದಾಯ ಬಂಡವಾಳ ನಿಧಿ ಅನುದಾನದ ಬೆಂಬಲವನ್ನು ನೀಡುವ ಮೂಲಕ ಬಡಜನರ ಆರ್ಥಿಕ ಭದ್ರತೆ/ಸುರಕ್ಷತೆಯನ್ನು ಉತ್ತೇಜಿಸುವುದಾಗಿದೆ.
ಬಡ್ಡಿ ಸಹಾಯಧನ: ಬಡ್ಡಿ ಸಹಾಯಧನ ಅಡಿಯಲ್ಲಿ ರೂ.3 ಲಕ್ಷದ ವರೆಗೆ ಸಾಲ ಪಡೆಯುವ ಬಿಪಿಎಲ್ ಸ್ವ ಸಹಾಯ ಗುಂಪುಗಳ ಸದಸ್ಯರುಗಳಿಗೆ ವಾರ್ಷಿಕ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು
ಬಡಕುಟುಂಬದ ಮಹಿಳೆಯರಿಗೆ
18 ರಿಂದ 35 ವಯೋಮಾನದ ಗ್ರಾಮೀಣ ಯುವಕ/ಯುವತಿಯರಿಗೆ
ವಿದ್ಯಾರ್ಹತೆ – 8ನೇ ತರಗತಿ ಮೇಲ್ಪಟ್ಟು
ಆನ್ಲೈನ್
https://kaushalya.karnataka.gov.in/
ನಿರ್ದೇಶಕರು, ಕೌಶಲ್ಯ ಮಿಷನ್,
ವೈಶಾಲಿ ಭವನ, ಡೈರಿ ಸರ್ಕಲ್ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಕರ್ನಾಟಕ
ಸಹಾಯವಾಣಿ: +080-2448 2558