PMKSY-WDC 2.0 ಯೋಜನೆಯು ದೇಶದ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿಯ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುವುದು, ಜಲಾನಯನ ಮಟ್ಟದಲ್ಲಿ ರೈತರಿಗೆ ಹೆಚ್ಚಿನ ಆದಾಯವನ್ನು ಸಾಧಿಸಲು ಅನುವುಮಾಡುವುದು, ಭೂರಹಿತರಿಗೆ ವಿಸ್ತರಿಸಿದ ಜೀವನೋಪಾಯದ ಆಯ್ಕೆಗಳನ್ನು ಒದಗಿಸುವುದು, ಯೋಜನೆಯ ಸವಲತ್ತುಗಳ ವಿತರಣೆಯಲ್ಲಿ ಸಮಾನತೆ, ಸಮುದಾಯದ ಮಾಲೀಕತ್ವ ಮತ್ತು ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.
ಯೋಜನೆಯ ಪ್ರಮುಖ ಉದ್ದೇಶಗಳು
ಪರ್ಯಾಯ ಬೆಳೆ ವ್ಯವಸ್ಥೆಗಳು ಮತ್ತು ಪಶುಸಂಗೋಪನೆಯ ಮೂಲಕ ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು ಮತ್ತು ರೈತರ ಆದಾಯವನ್ನು ಭದ್ರಪಡಿಸುವುದು. ಸಮರ್ಥ ನೀರು ಕೊಯ್ಲು, ಮಣ್ಣಿನ ತೇವಾಂಶ ಸಂರಕ್ಷಣೆ ಹಾಗೂ ಯೋಜನೆಯ ಸದಸ್ಯರಿಗೆ ಸಮಾನ ಆಧಾರದ ಮೇಲೆ ನೆಲ ಮತ್ತು ಮೇಲ್ಮೈ ನೀರಿನ ಸಂಪನ್ಮೂಲಗಳ ಬಳಕೆ ಒದಗಿಸುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಎಲ್ಲಾ ವರ್ಗದ ರೈತರು
ಅರ್ಹತೆಗಳು/ಮಾನದಂಡಗಳು
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರು ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಗುರುತಿನ ಚೀಟಿ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಸಂಪರ್ಕ
ಜಲಾನಯನ ಅಭಿವೃದ್ಧಿ ಇಲಾಖೆ,
7ನೇ ಮಹಡಿ,ಕೆ.ಹೆಚ್.ಬಿ ಸಂಕೀರ್ಣ, ಕಾವೇರಿ ಭವನ, ಕೆ.ಜಿ. ರಸ್ತೆ,ಬೆಂಗಳೂರು-560009