ಸಾಗಾಣಿಕೆಗೆ ಒಳಗಾದವರನ್ನು ಶೋಷಣೆ ಸ್ಥಳದಿಂದ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇಡಲು ಸಹಾಯ ಮಾಡುವುದು.
ಸಾಗಾಣಿಕೆಗೆ ಒಳಗಾದವರಿಗೆ ಮೂಲಭೂತ ಸೌಲಭ್ಯ, ಆಶ್ರಯ, ಆಹಾರ, ವಸ್ತ್ರ, ಸಮಾಲೋಚನೆ ಒಳಗೊಂಡಂತೆ ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವು ಮತ್ತು ಮಾರ್ಗದರ್ಶನ ಹಾಗೂ ವೃತ್ತಿ ತರಬೇತಿ ಸೇರಿದಂತೆ ತಕ್ಷಣ ಮತ್ತು ದೀರ್ಘಕಾಲಿಕ ಪುನರ್ವಸತಿ ಸೇವೆಯನ್ನು ಒದಗಿಸುವುದು.
ಸಾಗಾಣಿಕೆಗೆ ಒಳಗಾದವರನ್ನು ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ವಿಲೀನಗೊಳಿಸಲು ಸಹಾಯ ಮಾಡುವುದು.
ಗಡಿಪ್ರದೇಶವನ್ನು ದಾಟಿ ಬಂದಂತಹ ಸಾಗಾಣಿಕೆಗೆ ಒಳಗಾದವರನ್ನು ತನ್ನ ಮೂಲ ರಾಷ್ಟ್ರಕ್ಕೆ ಕಳುಹಿಸಿಕೊಡಲು ಸಹಾಯ ಮಾಡುವುದು.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಮಹಿಳೆಯರು ಮತ್ತು ಮಕ್ಕಳಿಗೆ
ಅರ್ಹತೆಗಳು/ಮಾನದಂಡಗಳು
ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ತುತ್ತಾಗಬಹುದಾದ ಮಹಿಳೆಯರು ಮತ್ತು ಮಕ್ಕಳು
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಆಫ್ಲೈನ್ (ಅರ್ಜಿ ನಮೂನೆಗಾಗಿ ಕಚೇರಿಯನ್ನು ಸಂಪರ್ಕಿಸುವುದು)
ಸಲ್ಲಿಸಬೇಕಾದ ದಾಖಲೆಗಳು
ಬಿಪಿಎಲ್ ಕಾರ್ಡ್
ಜನನ ಪ್ರಮಾಣ ಪತ್ರ
ಸಂಪರ್ಕ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಕಚೇರಿನ್ನು ಸಂಪರ್ಕಿಸುವುದು