ವೃತ್ತಿ ದರ್ಶಿ

ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಅರಿವು

ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ, ಉನ್ನತ ಶಿಕ್ಷಣದಲ್ಲಿ ರಾಜ್ಯದ ಮಕ್ಕಳ ದಾಖಲಾತಿ ದರ (Gross Enrolment Ratio) ಕೇವಲ ಶೇ. 32ರಷ್ಟು ಇರುತ್ತದೆ. ಇದನ್ನು ಹೆಚ್ಚಿಸಲು 10ನೇ ಮತ್ತು 12ನೇ ತರಗತಿಗಳ ನಂತರ ತಿಳುವಳಿಕೆಯುಳ್ಳ ವೃತ್ತಿ ಆಯ್ಕೆಯನ್ನು ಮಾಡಲು ವಿದ್ಯಾರ್ಥಿಗಳಿಗಾಗಿ ಸುಮಾರು 550+ ವೃತ್ತಿಪರ ಮಾಹಿತಿಗಳನ್ನು Yuva Kanaja ಪೋರ್ಟಲ್‌ನ ಮೂಲಕ ಒದಗಿಸಲಾಗುತ್ತಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯೊಂದಿಗೆ ಸಜ್ಜುಗೊಳಿಸುವ ಮೂಲಕ ಪ್ರತಿಭಾವಂತ ಉದ್ಯೋಗಿಗಳನ್ನು ಪೋಷಿಸಲು ಮತ್ತು ಉಜ್ವಲ ಭವಿಷ್ಯವನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಸಿಎಸ್‌ಆರ್‌ ಅಡಿಯಲ್ಲಿ UNDP ಸಂಸ್ಥೆಯು SAP ಸಂಸ್ಥೆಯೊಂದಿಗೆ ಜೊತೆಗೂಡಿ, ಸಿದ್ದಪಡಿಸಲಾಗಿರುವ Code Unnati ಎಂಬ ಯೋಜನೆಯನ್ನು ಈಗಾಗಲೇ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡಿದಲ್ಲಿ, ಅವರ ಕೌಶಲ್ಯವನ್ನು ವೃದ್ಧಿಸಿ, ಉದ್ಯೋಗಾವಕಾಶವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ. ಈ ಧ್ಯೇಯದೊಂದಿಗೆ ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ (ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ, ಪಂ. ರಾ. & ಗ್ರಾ ಆಭಿವ್ರುದ್ಧಿ, ಶಿಕ್ಷಣ, ಯುವಜನ ಸಬಲೀಕರಣ & ಕ್ರೀಡೆ) ವೃತ್ತಿದರ್ಶಿ ಕಾರ್ಯಕ್ರಮವನ್ನು UNDP ಯ ತಾಂತ್ರಿಕ ಬೆಂಬಲದೊಂದಿಗೆ ತಯಾರಿಸಲಾಗಿದೆ.

ಸೌಲಭ್ಯಗಳು

ಉದ್ದೇಶ

10ನೇಹಾಗು 12ನೇ ತರಗತಿಗಳ ನಂತರದ ಡ್ರಾಪ್ಔಟ್ದರಗಳನ್ನು ಕಡಿಮೆ ಮಾಡಿ ಈ ಹಂತದಲ್ಲಿ ದಾಖಲಾತಿ ಅನುಪಾತವನ್ನು (ಉಇಖ) ಹೆಚ್ಚಿಸಲು “10ನೇ ತರಗತಿ ಮತ್ತು 12ನೇ ತರಗತಿಯ ನಂತರ ಮುಂದೇನು?” ಅನ್ನುವದನ್ನು ಕೇಂದ್ರೀಕರಿಸುವ ವೃತ್ತಿಮಾರ್ಗದರ್ಶನ ಜಾಗೃತಿಕಾರ್ಯಕ್ರಮಗಳನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗು ಸಾಂಖ್ಯಿಕ ಇಲಾಖೆಯ ಮುಂದಾಳ್ತ್ವದಲ್ಲಿ ಪ್ರಾರಂಭಿಸಲಾಗಿದೆ. ಈಕಾರ್ಯಕ್ರಮಕ್ಕೆ ಶಾಲಾಶಿಕ್ಷಣಇಲಾಖೆ, ಪಿಯುಶಿಕ್ಷಣಇಲಾಖೆ ಯುವಸಬಲೀಕರಣ ಮತ್ತು ಕ್ರೀಡಾಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ರಾಜ್ಇಲಾಖೆ, ತಾಂತ್ರಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳ ಸಭಾಗಿತ್ವವಿದ್ದು UNDP ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದೆ.

ಸೌಲಭ್ಯ

ಕರ್ನಾಟಕ ಕರಿಯ ರ್ಪೋರ್ಟಲ್ ( https://karnatakacareerportal.com/)
ಅಭಿವ್ರುದ್ಧಿಗೊಳೀಸಲಾಗಿದ್ದು ಕೆಳಗಿನ ಮಾಹಿತಿ ಒಳಗೊಂಡಿದೆ:

  • 500ಕ್ಕು ಹೆಚ್ಚು ವ್ರುತ್ತಿ ಮಾರ್ಗಗಳ ಬಗ್ಗೆ ಸವಿಸ್ತಾರ ಮಾಹಿತಿ
  • 2500ಕ್ಕು ಹೆಚ್ಚು ಕಾಲೆಜುಗಳ ಮಾಹಿತಿ
  • 1200 ಕ್ಕುಹೆಚ್ಚು ಸ್ಕಾಲರ್ಶಿಪ್ಮಾಹಿತಿ
  • 1150 ಕ್ಕು ಹೆಚ್ಚು ಪ್ರವೇಶ ಪರೀಕ್ಷೆಗಳ ಮಾಹಿತಿ.

ವೃತ್ತಿ ಮಾರ್ಗದರ್ಶನ ವಿಡಿಯೋಗಳು: 10ನೇ ತರಗತಿ ನಂತರವೇನು ಮತ್ತು 12ನೇ ತರಗತಿ ನಂತರವೇನು ಎಂಬ ಶೀರ್ಷಿಕೆಯಡಿಯಲ್ಲಿ ತಜ್ಞಭಾಗವಹಿಸುವ ವಿವಿಧ ವೃತ್ತಿ ಮಾರ್ಗಗಳ ಬಗ್ಗೆ29 ವಿಡಿಯೋಗಳ ನೇರಪ್ರಸಾರ ಹಾಗು ಈಎಲ್ಲಾ ವಿಡಿಯೊಗಳು ಲಭ್ಯತೆ.

ಯಾರಿಗೆ / ಅರ್ಹತೆ ?

ಯಾರಿಗೆ?

8 – 12 ನೇತರಗತಿ ವಿಧ್ಯಾರ್ಥಿಗಳು

ಅರ್ಹತೆಗಳು/ಮಾನದಂಡಗಳು

8 – 12 ನೇತರಗತಿವಿಧ್ಯಾರ್ಥಿಗಳು, ಶಿಕ್ಷಕರು. ಪೋಷಕರು ಮತ್ತು ಯುವಜನತೆಗೆ ವೃತ್ತಿಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸಲು ಬಯಸುವವರು.

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ನೇರವಾಗಿ ಕರ್ನಾಟಕ ಕರಿಯರ್ಪೋರ್ಟಲ್ (https://karnatakacareerportal.com/) ನಲ್ಲಿ ಉಚಿತವಾಗಿ ನೋಂದಾವಣಿ ಮಾಡಿ ಮಾಹಿತಿ ಪಡೆಯಬಹುದು

ಸಂಪರ್ಕ

ನಿಶಾಂತ್ಚವಾಣ್
Project Associate UNDP

[email protected]

https://karnatakacareerportal.com/

9916927968

ಸಕಾಲ ವ್ಯಾಪ್ತಿಗೆ ಬರುತ್ತದೆಯೇ

ಇಲ್ಲ

ಸಂಘಟಕ ಪಾಲುದಾರರು