ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ,ಅಪಘಾತ (ಮೋಟಾರ್ ವಾಹನಗಳ ಪ್ರಕರಣಗಳನ್ನು ಹೊರತುಪಡಿಸಿ) ಹಾಗೂ ನವಜಾತ ಶಿಶುಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು
ಖಾಯಿಲೆಗಳಿಗೆ ಅಗತ್ಯವಾಗಿ ಬೇಕಾದ 402 ಬಗೆಯ ಶಸ್ತ್ರ ಚಿಕಿತ್ಸೆಗಳನ್ನುಗುರುತಿಸಲಾಗಿದ್ದು, ಈ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯದಲ್ಲಿ 130 ಸೂಪರ್
ಸ್ಪೆಶಾಲಿಟಿ ಆಸ್ಪತ್ರೆಗಳನ್ನು ಒಂದು ಆಸ್ಪತ್ರೆ ಜಾಲ ನಿರ್ಮಿಸಲಾಗಿದೆ
ಚಿಕಿತ್ಸೆ ಮತ್ತು ಆರೈಕೆಗೆ ತಗಲುವ ವೆಚ್ಚವನ್ನು ಸರಕಾರವೇ ಭರಿಸುತ್ತದೆ
ರೋಗ ಪತ್ತೆಯಿಂದ ಖಾಯಿಲೆ ಗುಣವಾಗುವವರೆಗೆ ಎಲ್ಲಾ ಪರೀಕ್ಷೆ, ಚಿಕಿತ್ಸೆ,ಔಷಧಿ, ಊಟೋಪಚಾರ ಹಾಗೂ ಪ್ರಯಾಣ ಉಚಿತವಾಗಿರುತ್ತದೆ
ಪ್ರತೀ ಬಿ.ಪಿ.ಎಲ್ ಕುಟುಂಬಕ್ಕೂ ಉಚಿತ ಚಿಕಿತ್ಸೆ
ಹೆಚ್ಚಿನ ಮೊತ್ತದ ಅಗತ್ಯವಿರುವ ಪ್ರಕರಣಗಳಲ್ಲಿ ಪರಿಶೀಲನೆಯ ನಂತರ ಹೆಚ್ಚುವರಿಯಾಗಿ ರೂ.50,000/-ವರೆಗೆ ನೀಡಲಾಗುತ್ತದೆ.
ರಿಯಾಯಿತಿ
ಯಾರಿಗೆ / ಅರ್ಹತೆ ?
ಯಾರಿಗೆ?
ಬಿ.ಪಿಎಲ್ ಹಾಗೂ ಎ.ಪಿ.ಎಲ್ ಕಾರ್ಡ್ ಹೊದಿರುವ ನಾಗರೀಕರಿಗೆ
ಅರ್ಹತೆಗಳು/ಮಾನದಂಡಗಳು
ಈ ಮೊತ್ತ ಕುಟುಂಬದ 5 ಜನರಿಗೆ ಸಲ್ಲುತ್ತದೆ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸುವ ವಿಧಾನ
ಸಮೀಪದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಅಥವಾ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು
ಸಲ್ಲಿಸಬೇಕಾದ ದಾಖಲೆಗಳು
ಬಿ.ಪಿಎಲ್ ಹಾಗೂ ಎ.ಪಿ.ಎಲ್ ಕಾರ್ಡ್
ಸಂಪರ್ಕ
ಸಮೀಪದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಅಥವಾ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು